ನೀವು ಕೇವಲ ನನ್ನ ವಿಡಿಯೋಗಳಿಂದಲೇ ಪೂರ್ತಿ ಇಂಗ್ಲೀಷ್ ಕಲಿಯಬಹುದು. (ಈ ಕೆಳಗೆ ಹೇಳಿರುವಂತೆ ಮಾಡಿದರೆ).
1. ನಾನು ಹೊಸದಾಗಿ ಆರಂಭಿಸಿರುವ Zero to Hero ಸ್ಪೋಕನ್ ಇಂಗ್ಲೀಷ್ ಸೀರೀಸ್ನ ಎಲ್ಲಾ ವಿಡಿಯೋಗಳನ್ನು ಮೊದಲನೇ ಕ್ಲಾಸ್ ನಿಂದ ಸೀರಿಯಲ್ಲಾಗಿ ನೋಡಿ.
2. ವಿಡಿಯೋ ನೋಡಲು ಒಂದು ನಿಗಧಿತ ಸಮಯ, ಶಾಂತವಾದ ಸ್ಥಳ ಇಟ್ಟುಕೊಳ್ಳಿ.
3. ನೋಡುವಾಗ ಇಯರ್ ಫೋನ್ ಹಾಕಿಕೊಂಡು ನಾನು ಹೇಳುವ ಪ್ರತೀ ವಿಷಯವನ್ನು ಚೆನ್ನಾಗಿ ಕೇಳಿಸಿಕೊಳ್ಳಿ.
4. ಪ್ರತೀ ವಿಡಿಯೋವನ್ನು 2 – 3 ಬಾರಿ ನೋಡಲೇಬೇಕು, ಆಗ ಮಾತ್ರ ಯಾವುದೇ ಡೌಟ್ / ಕನ್ಫ್ಯೂಷನ್ ಇರುವುದಿಲ್ಲ. ಏಕೆಂದರೆ ನೀವು ಮೊದಲ ಬಾರಿ ಕೇಳಿಸಿಕೊಳ್ಳದ ಅಥವಾ ಗಮನಕೊಡದ ಎಷ್ಟೋ ವಿಷಯಗಳನ್ನು ಎರಡನೇ ಬಾರಿಗೆ ನೋಡುವಾಗ ಗೊತ್ತಾಗುತ್ತದೆ.
5. ಪೂರ್ತಿ ವಿಡಿಯೋ (2-3 ಬಾರಿ) ನೋಡಿದ ನಂತರ, ನೋಟ್ ಬುಕ್ ನಲ್ಲಿ ಬರೆದುಕೊಂಡು ನೋಟ್ಸ್ ಮಾಡಿಕೊಳ್ಳಿ ಹಾಗೂ ಒಂದು ಬಾರಿ ಚೆನ್ನಾಗಿ ಓದಿಬಿಡಿ.
6. ನಾನು ಪ್ರತೀ ವಿಡಿಯೋದಲ್ಲಿ ಹಳುವ ಈ 3 ಮೆಥಡ್ಸ್ ಅನ್ನು ನೀವು ಪಾಲಿಸಲೇಬೆಕು.
A: ನಾನು ಕೊಟ್ಟ ಪ್ರತೀ ವಾಕ್ಯಕ್ಕೂ ನೀವು ನಿಮ್ಮದೇ ಆದ 5-10 ವಾಕ್ಯಗಳನ್ನು ಸ್ವಂತವಾಗಿ ರಚಿಸಿ (ಕೇವಲ ಮುಖ್ಯ ಪದಗಳನ್ನು ಬದಲಾಯಿಸಿ).
B: ಬರೆದ ಎಲ್ಲಾ ವಾಕ್ಯಗಳನ್ನು ಜೋರಾಗಿ ಒಂದೆರೆಡು ಬಾರಿ ಓದಿ. *
C: ನಂತರ ಆ ಎಲ್ಲಾ ವಾಕ್ಯಗಳನ್ನು ಫೋ಼ನ್ ನಲ್ಲಿರುವ ಸೌಂಡ್ ರೆಕಾಡರ್ ನ ಮೂಲಕ ಜೋರಾಗಿ ಓದುತ್ತಾ ರೆಕಾಡ್ ಮಾಡಿಕೊಳ್ಳಿ, ರೆಕಾಡ್ ಮಾಡಿಕೊಂಡ ಈ ಎಲ್ಲಾ ವಾಕ್ಯಗಳನ್ನು ಪದೇ ಪದೇ ಕೇಳಿ.
(ಈ 3 ಮೆಥಡ್ಸ್ ಅನ್ನು ನೀವು ಪ್ರತೀ ಕ್ಲಾಸ್ ನಲ್ಲೂ ಪಾಲಿಸಲೇಬೆಕು.)
7. ನೀವು ಕ್ಲಾಸ್ ಗಳನ್ನು ಮೊದಲಿನಿಂದ ನೋಡಲು ಅಥವಾ ಯಾವುದೇ ವಿಡಿಯೋ ಮಿಸ್ ಆದರೂ, ನೋಡಿದ ವಿಡಿಯೋ ಮತ್ತೊಮ್ಮೆ ನೋಡಲು ವಿಡಿಯೋ ಕೆಳಗಿರುವ ನನ್ನ ಹೆಸರು *Yuvaraj Madha* ಕ್ಲಿಕ್ ಮಾಡಿ.
ನಾನು ಮೇಲೆ ಹೇಳಿದ ಎಲ್ಲಾ ವಿಷಯಗಳನ್ನು ಪಾಲಿಸಲು ನಿಮ್ಮ ಬಳಿ ಡಿಸಿಪ್ಲಿನ್ ಹಾಗೂ ಕಷ್ಟ ಪಟ್ಟೇ ಪಡುವ ಸಂಕಲ್ಪ ಇರಬೇಕು. ಇದು ಎಲ್ಲರ ಬಳಿಯೂ ಇರುವುದಿಲ್ಲ. ನಿಮ್ಮ ಬಳಿ ಈ ಎರಡೂ ಅಂಶಗಳು ಇದ್ದರೆ ನಿರೂಪಿಸಿ.
ನನ್ನ ಚಾನಲ್‌ನಲ್ಲಿ ಎಲ್ಲಾ ವೀಡಿಯೊಗಳನ್ನು ಹೇಗೆ ನೋಡುವುದು
Click here: